ಜುಲೈ ೨೪ - ಜುಲೈ ತಿಂಗಳ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೫ನೇ ದಿನ (ಅಧಿಕ ವರ್ಷದಲ್ಲಿ ೨೦೬ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೮೪೭ - ಬ್ರಿಗ್ಹಮ್ ಯಂಗ್ನ ನೇತೃತ್ವದ ೧೪೮ ಮಾರ್ಮನ್ ಧಾರ್ಮಿಕರು ೧೭ ತಿಂಗಳ ಪ್ರವಾಸದ ನಂತರ ಸಾಲ್ಟ್ ಲೇಕ್ ಕಣಿವೆಯನ್ನು ತಲುಪಿ ಮುಂದೆ ಸಾಲ್ಟ್ ಲೇಕ್ ನಗರದ ಸ್ಥಾಪನೆಗೆ ಕಾರಣೀಭೂತರಾದರು. ೧೯೧೧ - ಮೂರನೇ ಹಿರಾಮ್ ಬಿಂಗ್ಹಮ್ ಈಗಿನ ಪೆರುವಿನಲ್ಲಿ ಕಳೆದುಹೋದ ಇಂಕಾ ನಗರವಾದ ಮಾಚು ಪಿಚ್ಚು ಅನ್ನು ಪತ್ತೆಮಾಡಿದ. ೧೯೨೩ - ಮೊದಲನೇ ಮಹಾಯುದ್ಧದ ನಂತರದಲ್ಲಿನ ಟರ್ಕಿಯ ಗಡಿಗಳನ್ನು ಲೌಸಾನ್ ಒಪ್ಪಂದದಲ್ಲಿ ನಿರ್ಧರಿಸಲಾಯಿತು. ೧೯೬೯ - ಅಪೊಲೊ ಕಾರ್ಯಕ್ರಮದ ಅಪೊಲೊ ೧೧ ಯಶಸ್ವಿಯಾಗಿ ಭೂಮಿಗೆ ಹಿಂದಿರುಗಿತು. ೧೯೯೧ - ಭಾರತದ ಸರ್ಕಾರ ತನ್ನ ಹೊಸ ಉದ್ಯಮ ಕಾರ್ಯನೀತಿಯನ್ನು ಘೋಷಿಸಿ ಆರ್ಥಿಕ ಸುಧಾರಣೆಯನ್ನು ಪ್ರಾರಂಭಿಸಿತು. ೨೦೦೫ - ಲ್ಯಾನ್ಸ್ ಆರ್ಮ್‍ಸ್ಟ್ರಾಂಗ್ ಸತತವಾಗಿ ತನ್ನ ಏಳನೇ ತೂರ್ ದ ಫ್ರಾನ್ಸ್ ಅನ್ನು ಗೆದ್ದನು. == ಜನನಗಳು == ೧೭೮೩ - ಸಿಮೊನ್ ಬೋಲಿವಾರ್, ದಕ್ಷಿಣ ಅಮೇರಿಕದ ಸ್ವಾತಂತ್ರ್ಯ ಹೋರಾಟಗಾರ. ೧೯೪೭ - ಜಹೀರ್ ಅಬ್ಬಾಸ್, ಪಾಕಿಸ್ತಾನದ ಕ್ರಿಕೆಟ್ ಆಟಗಾರ. == ಮರಣಗಳು == == ರಜೆಗಳು/ಆಚರಣೆಗಳು == ಎಕುಡಾರ್, ವೆನೆಜುವೆಲ - ಸಿಮೋನ್ ಬೊಲಿವಾರ್ ದಿನ. ಯುಟಾ - ಪಯನೀರ್ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ